ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವು ಕಚ್ಚಿ ಶಾಲಾ ವಿದ್ಯಾರ್ಥಿ ಗಂಭೀರ!

ಕಾರವಾರ: ಶಾಲೆಯಲ್ಲಿ ಹಾವು ಕಚ್ಚಿ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಟ್ಕಳದ ಮುರ್ಡೇಶ್ವರ ನ್ಯಾಷನಲ್ ಕಾಲನಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

5ನೇ ತರಗತಿಯ ವಿದ್ಯಾರ್ಥಿ ಅಲ್ಫಾಝ್ ಸರ್ತಾಝ್ ಹಾವಿನ ಕಡಿತಕ್ಕೊಳಗಾದ ವಿದ್ಯಾರ್ಥಿ. ತರಗತಿಯಲ್ಲಿದ್ದ ವೇಳೆ ಕಿಟಕಿಯ ಹೊರಗೆ ಪೆನ್ಸಿಲ್ ಬಿದ್ದಿದ್ದು, ಅದನ್ನು ತರಲು ಹೊರಗೆ ಹೋಗುತ್ತಿದ್ದ ವೇಳೆ ಬಾಲಕನ ಕಾಲಿಗೆ ಹಾವು ಕಚ್ಚಿದೆ ಎನ್ನಲಾಗಿದೆ. ಕೂಡಲೇ ವಿದ್ಯಾರ್ಥಿಯನ್ನು ಮುರ್ಡೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಭಟ್ಕಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಹಾವು ಕಚ್ಚಿದ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರಕಾರಿ ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

Edited By : Nagesh Gaonkar
PublicNext

PublicNext

06/09/2022 09:54 pm

Cinque Terre

67.57 K

Cinque Terre

3

ಸಂಬಂಧಿತ ಸುದ್ದಿ