ಉತ್ತರಕನ್ನಡ: ಮನೆಯ ಹಿಂಭಾಗದ ಬಯಲಿಗೆ ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ಶಿರಸಿಯ ಗ್ರಾಮೀಣ ಭಾಗ ಮತ್ತಿಘಟ್ಟದಲ್ಲಿ ನಡೆದಿದೆ.ಇತ್ತಿಚೆಗಷ್ಟೇ ಈ ಪ್ರದೇಶದಲ್ಲಿ ಕರಡಿ ದಾಳಿಗೆ ಸಿಲುಕಿ ರೈತರೊಬ್ಬರು ಮೃತಪಟ್ಟಿದ್ದರು. ಸದ್ಯ ಹಿಂದಿನ ಘಟನೆ ಮರೆಯುವ ಮುನ್ನವೇ ಹುಲಿ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಸದ್ಯ ಹುಲಿ ದಾಳಿಯಿಂದ ವಿಶ್ವನಾಥ ಭಟ್ಟ ಎನ್ನುವವರ ಒಂದುವರ್ಷದ ಹಸು ಸಾವನ್ನಪ್ಪಿದ್ದು ಸ್ಥಳಕ್ಕೆ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
PublicNext
03/09/2022 12:21 pm