ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಟ್ರಾಕ್ಟರ್ ಚಾಲಕನ ಹುಂಬತನದ ಡ್ರೈವಿಂಗ್; ತಪ್ಪಿದ ಅನಾಹುತ..!

ಮಧುಗಿರಿ: ತಾಲೂಕಿನ ಗುಟ್ಟೆ ಮತ್ತು ಚಂದ್ರಗಿರಿ ರಸ್ತೆಯಲ್ಲಿ ಭಾನುವಾರ ಕೆಲಸಕ್ಕಾಗಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆ ಸಿಗುವಂತಹ ಹಳ್ಳದ ರಸ್ತೆಯನ್ನು ಟ್ರಾಕ್ಟರ್ ಚಾಲಕ ನಾನು ಚಾಲನೆ ಮಾಡಿ ದಾಟಿಸುತ್ತೇನೆ ಎನ್ನುವ ಹುಂಬತನದಿಂದ ಟ್ರಾಕ್ಟರ್ ಚಾಲನೆ ಮಾಡಿ, ನೀರಿನ ರಭಸಕ್ಕೆ ಚಾಲನೆ ಮಾಡಲಾಗದೆ ಟ್ರ್ಯಾಕ್ಟರ್ ಮುಗುಚಿಕೊಂಡು ಹಲವು ಕೂಲಿಕಾರ್ಮಿಕರು ನೀರಿನಲ್ಲಿ ಬಿದ್ದ ಘಟನೆ ನಡೆದಿದೆ.

ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲವಾದರೂ ಟ್ರಾಕ್ಟರ್ ಚಾಲಕನ ಅಜಾಗರೂಕತೆ ನಿರ್ಲಕ್ಷವೇ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ. ನೀರಿನಲ್ಲಿ ಬಿದ್ದ ಕೆಲವರನ್ನು ರಕ್ಷಣೆ ಮಾಡಲಾಗಿದೆ. ಟ್ರ್ಯಾಕ್ಟರ್ ಚಾಲಕನ ಬಳಿ ಯಾವುದೇ ಚಾಲನೆ ಲೈಸೆನ್ಸ್ ಇರಲಿಲ್ಲ ಎನ್ನಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು ಟ್ರ್ಯಾಕ್ಟರ್ ಚಾಲಕನ ನಡೆಗೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗಿದೆ. ಘಟನೆ ಉದಾಹರಣೆಯಾಗಿಟ್ಟುಕೊಂಡು ಯಾವ ಚಾಲಕರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಪ್ರಜ್ಞಾವಂತರು ಮನವಿ ಮಾಡಿದ್ದಾರೆ.

ವರದಿ: ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By : Nagesh Gaonkar
PublicNext

PublicNext

28/08/2022 08:01 pm

Cinque Terre

46.05 K

Cinque Terre

0