ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಭೀಕರ ರಸ್ತೆ ಅಪಘಾತದಲ್ಲಿ ರೈತ ಸಾವು

ಗದಗ: ಮೋಟಾರು ಸೈಕಲ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಸಮೀಪದ ಹೊಂಬಳ ರಸ್ತೆಯಲ್ಲಿ ಜರುಗಿದೆ.

ಪಶು ವಿಶ್ವವಿದ್ಯಾಲಯದ ಸಮೀಪ ನಡೆದ ಈ ದುರಂತದಲ್ಲಿ ಜಮೀನಿಗೆ ಬುತ್ತಿ ಕೊಡಲು ಟಿವಿಎಸ್ ಎಕ್ಸಲ್ ಮೋಟಾರ್ ಸೈಕಲ್‌ ಮೇಲೆ ಹೊರಟಿದ್ದ ಗದಗನ ಹಾಳದಿಬ್ಬ ನಿವಾಸಿ ಮಂಜುನಾಥ್ ಕಲಬಂಡಿ (27) ಮೃತಪಟ್ಟ ದುರ್ಧೈವಿ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದರು. ಗದಗ ನಗರದಿಂದ ಹೊಂಬಳ ಕಡೆಗೆ ಹೊರಟಿದ್ದ ಕಾರು, ಮೋಟಾರು ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಸುಮಾರು 100ಮೀಟರ್ ನಷ್ಟು ದೂರಕ್ಕೆ ತಳ್ಳಿಕೊಂಡು ಹೋಗಿದೆ ಎನ್ನಲಾಗಿದೆ.

Edited By : Manjunath H D
PublicNext

PublicNext

28/08/2022 02:03 pm

Cinque Terre

66.4 K

Cinque Terre

4

ಸಂಬಂಧಿತ ಸುದ್ದಿ