ಅಥಣಿ : ಆಕಸ್ಮಿಕ ಕಾಲು ಜಾರಿ ಕೃಷ್ಣಾ ನದಿ ಪಾಲಾಗಿದ್ದ ಯುವಕನ ಶವ ಭಾನುವಾರ ಬಳಗ್ಗೆ ತಾಲೂಕಿನ ಸತ್ತಿ ಗ್ರಾಮದ ನದಿ ದಡದಲ್ಲಿ ಪತ್ತೆಯಾಗಿದೆ. ಶ್ರಾವಣ ಮಾಸದ ಪೂಜೆಗಾಗಿ ಸ್ನಾನ ಮಾಡಿ ದೇವರಿಗೆ ನೀರು ಒಯ್ಯಲು ನದಿಗೆ ಇಳಿದಾಗ ದಿ. 26 ರಂದು ಈ ದುರ್ಘಟನೆ ಸಂಭವಿಸಿತ್ತು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ಎಂಬಾತನೇ ಮೃತಪಟ್ಟ ಯುವಕ. ಕಳೆದ ಎರಡು ದಿನಗಳಿಂದ ಹಲ್ಯಾಳ-ದರೂರ ಬ್ರಿಡ್ಜ್ ಅಕ್ಕಪಕ್ಕ ಹಾಗೂ ಇತರ ಕಡೆ ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ತಂಡದವರು ಸುರಿಯುವ ಮಳೆಯಲ್ಲಿಯೂ ಕೂಡ ಶೋಧ ನಡೆಸಿದ್ದರು.
ಸ್ಥಳಕ್ಕೆ ಅಗ್ನಿಶಾಮಕದಳ, ಎಸ್.ಡಿ.ಆರ್.ಎಫ್ ಹಾಗೂ ಪೋಲಿಸ್ ಆಧಿಕಾರಿಗಳು ಆಗಮಿಸಿ ಯುವಕನ ಶವ ಹೊರತೆಗೆದಿದ್ದಾರೆ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಜರುಗಿದೆ.
PublicNext
28/08/2022 10:55 am