ಬಾಗಲಕೋಟೆ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾಗಲಕೋಟೆಯ ಸಿಆರ್ಪಿಎಫ್ ಯೋಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗುಡೂರು ಗ್ರಾಮದ ಚಿದಾನಂದ ಭಜಂತ್ರಿ (52) ಮೃತ ಯೋಧ. ಚಿದಾನಂದ ಭಜಂತ್ರಿ ಅವರು 1988ರಲ್ಲಿ ಸಿಆರ್ಪಿಎಫ್ ಸೇರಿದ್ದರು. ಅವರು ಬೆಳಗಾವಿಯ 32 ಸಿಆರ್ಪಿಎಫ್ ಬಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪತ್ನಿಗೆ ಹುಷಾರಿಲ್ಲದ ಕಾರಣ ರಜೆ ಮೇಲೆ ಊರಿಗೆ ಬಂದಿದ್ದರು. ಆಗಷ್ಟ್ 9ರಂದು ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಬಳಿ ಇವರ ಬೈಕ್ಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಇದರಿಂದ ಯೋಧ ಗಂಭೀರ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಗುಡೂರು ಗ್ರಾಮದ ಸ್ಮಶಾನದಲ್ಲಿ ಇಂದು (ಆ.24) ರಾತ್ರಿ 8 ಗಂಟೆಗೆ ಯೋಧ ಚಿದಾನಂದ ಭಜಂತ್ರಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
PublicNext
24/08/2022 08:13 pm