ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 39 ಐಟಿಬಿಪಿ ಮತ್ತು ಇಬ್ಬರು ಜಮ್ಮ ಕಾಶ್ಮೀರ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಗೆ ಉರುಳಿ ಬಿದ್ದ ಘಟಯಲ್ಲಿ ಈಗಾಗಲೇ 6 ಜನ ಯೋಧರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಬ್ರೇಕ್ ಫೇಲ್ಯೂರ್ ಆಗಿ ಬಸ್ ನದಿ ತಟದಲ್ಲಿ ಪಲ್ಟಿಯಾಗಿತ್ತು.
ಬಸ್ಸಿನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಸೇರಿ 39 ಮಂದಿ ಪ್ರಯಾಣಿಕರು ಇದ್ದರು. ವರದಿಗಳ ಪ್ರಕಾರ ಬಸ್ಸಿನಲ್ಲಿ 37 ಐಟಿಬಿಪಿ ಯೋಧರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಇದ್ದರು. ಘಟನಾ ಸ್ಥಳಕ್ಕೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯ ಚುರುಕುಗೊಂಡಿದ್ದು, ಸಾವು-ನೋವಿನ ಆತಂಕ ಹೆಚ್ಚಾಗಿದೆ.
PublicNext
16/08/2022 01:48 pm