ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪೆಟ್ರೋಲ್ ಟ್ಯಾಂಕರ್, ಕಾರು ನಡುವೆ ಅಪಘಾತ; ಓರ್ವ ಸಾವು

ಬೆಳಗಾವಿ: ಸವದತ್ತಿ ಪಟ್ಟಣಕ್ಕೆ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಹಾಗೂ ಧಾರವಾಡ ನಗರಕ್ಕೆ ಹೋಗುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸವದತ್ತಿ ಮತ್ತು ಧಾರವಾಡದ ಹೆದ್ದಾರಿಯಲ್ಲಿ ಸಂಭವಿಸಿದೆ.

ಶನಿವಾರ ಸಂಜೆ ಪೆಟ್ರೋಲ್ ಟ್ಯಾಂಕರ್ ಒಂದು ಸವದತ್ತಿ-ಧಾರವಾಡ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಘಟನೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ವಿಫ್ಟ್ ಕಾರ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹತ್ತಿರ ನಡೆದ ಘಟನೆ ನಡೆದಿದ್ದು, ಪೆಟ್ರೋಲ್ ಟ್ಯಾಂಕರ್ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಪೆಟ್ರೋಲ್ ಪಲ್ಟಿ ಹೊಡೆದ ಕಾರಣ ಟ್ಯಾಂಕರ್‌ನಲಿದ್ದ ಪೆಟ್ರೋಲ್ ರಸ್ತೆಯ ತುಂಬಾ ಚೆಲ್ಲಾಪಿಲ್ಲಿಯಾಗಿದ್ದು, ಸ್ಥಳೀಯರು ಪೆಟ್ರೋಲ್ ತುಂಬಿಕೊಂಡು ಹೋಗಿ ಮತ್ತೊಂದು ಪೆಟ್ರೋಲ್ ಟ್ಯಾಂಕರ್ ವಾಹನಕ್ಕೆ ಪೆಟ್ರೋಲ್ ತುಂಬಿಸುತ್ತಿರುವ ದೃಶ್ಯಗಳು ಕಂಡುಬಂತು. ಆದರೆ ಇದೆ ಸಿಕ್ಕಾಪಟ್ಟೆಯಾಗಿ ರಸ್ತೆ ತುಂಬಾ ಪೆಟ್ರೋಲ್ ಬಿದ್ದ ಪರಿಣಾಮ ಕೆಲ ಕಾಲ ಸ್ಥಳೀಯರಲ್ಲಿ ಆತಂಕವು ಕೂಡ ಕಂಡು ಬಂದಿತ್ತು.

Edited By : Nagesh Gaonkar
PublicNext

PublicNext

13/08/2022 10:50 pm

Cinque Terre

64.76 K

Cinque Terre

0

ಸಂಬಂಧಿತ ಸುದ್ದಿ