ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡು: ರುದ್ರ ರಮಣೀಯ ಜಲಪಾತದ ಮುಂದೆ ಪೋಸ್-ಜಾರಿ ಬಿದ್ದು ನೀರುಪಾಲಾದ ಯುವಕ!

ತಮಿಳುನಾಡು:ಸತತವಾಗಿಯೇ ಮಳೆ ಸುರಿಯುತ್ತಿದೆ ಈ ಹಿನ್ನೆಲೆಯಲ್ಲಿ ಇಲ್ಲಿನ ದಿಂಡಿಗಲ್ ಜಲಾಶಯ ತುಂಬಿ ಹರಿಯುತ್ತಿದೆ.ಈ ನಿಸರ್ಗ ಸೌಂದರ್ಯವನ್ನ ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿ ಬರುತ್ತಿದ್ದಾರೆ.

ಆದರೆ, ಇದೇ ಸಮಯದಲ್ಲಿಯೇ ಯುವಕನೊಬ್ಬ ಫೋಟೋ,ವೀಡಿಯೋಗೆ ಪೋಸ್ ಕೊಡಲು ಹೋಗಿ ಬಿದ್ದು ನೀರುಪಾಲಾಗಿದ್ದಾನೆ.

ಹೌದು. ಪರಮಕುಡಿಯ ಅಜಯ್ ಪಾಂಡಿಯನ್ ಸ್ನೇಹಿತರ ಜೊತೆಗೆ ಈ ಜಲಪಾತಕ್ಕೆ ಬಂದಿದ್ದನು. ಇಲ್ಲಿಯ ರುದ್ರ ರಮಣೀಯ ದೃಶ್ಯ ನೋಡಿ ಕಳೆದೆ ಹೋಗಿದ್ದಾನೆ. ಆ ಕೂಡಲೇ ಗೆಳೆಯನಿಗೆ "ನೀನು ವೀಡಿಯೋ ಮಾಡು ನಾನು ಪೋಜ್ ಕೊಡುತ್ತೇನೆ" ಎಂದು

ಹೇಳಿ ಪೋಜ್ ಕೊಟ್ಟಿದ್ದಾನೆ.

ಅಷ್ಟೇ ನೋಡಿ, ಆ ವೇಳೆ ಈ ಯುವಕನ ಕಾಲು ಜಾರಿದೆ. ಆ ಬಳಿಕ ನೂರಡಿ ಆಳಕ್ಕೆ ಬಿದ್ದು ಬಿಟ್ಟಿದ್ದಾನೆ. ಈ ಒಂದು ದೃಶ್ಯ ಸ್ನೇಹಿತರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ಪ್ರವಾಸಿಗರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Edited By :
PublicNext

PublicNext

05/08/2022 09:16 am

Cinque Terre

77.11 K

Cinque Terre

0