ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಟ್ಯಾಂಕರ್, ಕಾರು ನಡುವೆ ಡಿಕ್ಕಿಯಾಗಿ ಆರು ತಿಂಗಳ ಹೆಣ್ಣು ಮಗು ಸೇರಿ ಒಂದೇ ಕುಟುಂಬದ 7 ಜನ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಬಳಿ ನಡೆದಿದೆ.
ಮೃತಪಟ್ಟವರನ್ನು ರಾಯಚೂರು ಜಿಲ್ಲೆ ಲಿಂಗಸೂಗುರು ತಾಲೂಕಿನ ಹಟ್ಟಿ ಪಟ್ಟಣದವರು ಎಂದು ಗುರುತಿಸಲಾಗಿದೆ. ಮಹ್ಮದ್ ವಾಜೀದ್ ಹುಸೇನ್(39), ಮಹ್ಮದ್ ಮಜರ್ ಹುಸೇನ್(79), ನೂರ್ ಜಹಾನ್ ಬೇಗಂ (70), ಹೀನಾ ಬೇಗಂ(30), ಇಮ್ರಾನ್ (22), ಆರು ತಿಂಗಳ ಮಗು ಉಮೇಜಾ ಹಾಗೂ ಮಹ್ಮದ್ ಫಾಜೀಲ್ ಹುಸೇನ್ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.
ತೆಲಂಗಾಣದ ಕೊಡಂಗಲ್ ಜವಳ ಕಾರ್ಯಕ್ಕೆಂದು ಒಂದೇ ಕಾರಿನಲ್ಲಿ 7 ಜನ ಹೋಗಿದ್ದರು. ಈ ವೇಳೆ ಗುರುಮಠಕಲ್ ಬಳಿ ಟ್ಯಾಂಕರ್ ಗೆ ಕಾರು ಡಿಕ್ಕಿಯಾದ ಪರಿಣಾಮ ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸೊ ಮಾರ್ಗ ಮಧ್ಯೆ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
PublicNext
05/08/2022 07:25 am