ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಯುವಕ ಪ್ರಾಣಾಪಾಯದಿಂದ ಪಾರು

ಹಾವೇರಿ: ಜಿಲ್ಲೆಗೆ ರಾಣೆಬೆನ್ನೂರು ನಗರದಲ್ಲಿ ಸತತ ಮಳೆಯಿಂದ ಹಲವು ರಸ್ತೆ ಸಂಚಾರ ಬಂದ್ ಆಗಿದೆ. ಈ ವೇಳೆ ಯುವಕನೊಬ್ಬ ಹರಿಯುವ ನೀರಿನಲ್ಲಿ ಶೋ ಕೊಡಲುಹೋಗಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾನೆ. ರಾಣೆಬೆನ್ನೂರಿನಲ್ಲಿ ಮಾಡಿದ್ದುಣ್ಣೋ ಮಾರಾಯ ಕಥೆ ಈ ಯುವಕನದಾಗಿದೆ.

ಹರಿಯುವ ನೀರಿನಲ್ಲಿ ಶೋ ಕೊಡಲು ಹೋಗಿ ನೀರು ಪಾಲಾಗ್ತಿದ್ದ ಯುವಕ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾನೆ. ರಾಣೆಬೆನ್ನೂರಿನ ಈಶ್ವರ ನಗರದಲ್ಲಿ ಘಟನೆ ನಡೆದಿದೆ. ಸ್ಥಳೀಯರು ಎಷ್ಟೇ ಹೇಳಿದರು ಕೇಳದೆ ಶೋ ಕೊಡಲು ಬೈಕ್ ಚಲಾಯಿಸಿಕೊಂಡು ಹೋಗಿದ್ದಾನೆ. ನಂತರ ತನ್ನ ತಪ್ಪಿನ ಅರಿವಾಗಿ ಜನರ ಸಹಾಯವನ್ನು ಕೇಳಿ ಮೇಲಕ್ಕೆ ಬಂದಿದ್ದಾನೆ. ಆದರೆ ಬೈಕ್ ಮಾತ್ರ ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಈ ಯುವಕನ ಹುಚ್ಚಾಟ ಕಂಡು ಸ್ಥಳೀಯರು ಬುದ್ಧಿ ಹೇಳಿದ್ದಾರೆ.

Edited By :
PublicNext

PublicNext

04/08/2022 02:59 pm

Cinque Terre

41.35 K

Cinque Terre

1

ಸಂಬಂಧಿತ ಸುದ್ದಿ