ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೌಚಾಲಯ ಗುಂಡಿಯಲ್ಲಿ ಬಿದ್ದು ಬಾಲಕ ಸಾವು

ಹಾವೇರಿ : ಆಟವಾಡಲು ತೆರಳಿದ್ದ 3 ವರ್ಷದ ಬಾಲಕ ನಿರ್ಮಾಣ ಹಂತದಲ್ಲಿರುವ ನೀರು ತುಂಬಿದ ಶೌಚಾಲಯದ ಗುಂಡಿಯಲ್ಲಿ ಬಿದ್ದು ಸಾವನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುದರ್ಶನ್ ನೀಲಪ್ಪ ಓಲೇಕಾರ ಎನ್ನುವ ಬಾಲಕ ಆಕಸ್ಮಿಕವಾಗಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಬಾಲಕ ತಂದೆಯೊಂದಿಗೆ ಹೋಗಿದ್ದಾನೆಂದು ತಿಳಿದು ತಾಯಿ ಪಂಚಮಿ ಹಬ್ಬದ ತಯಾರಿಯಲ್ಲಿದ್ದಳು ಬಳಿಕ ಬಾಲಕನ ತಂದೆ ನೀಲಪ್ಪ ಮನೆಗೆ ಆಗಮಿಸಿದ ವೇಳೆ ಬಾಲಕನ ತಾಯಿ ವಿಚಾರಿಸಿದಾಗ, ಸುದರ್ಶನ್ ತನ್ನೊಂದಿಗೆ ಬಂದಿಲ್ಲ ಮನೆ ಹೊರಗೆ ಆಟವಾಡುತ್ತಿದ್ದ ಎಂದು ಪತ್ನಿಗೆ ತಿಳಿಸಿದ ವೇಳೆ ಆತಂಕಕ್ಕೆ ಒಳಗಾದ ಸುದರ್ಶನ್ ತಂದೆ-ತಾಯಿ ಶೋಧ ನಡೆಸಿದ್ದಾರೆ.

ಕೆಲ ಸಮಯದ ನಂತರ ಗುಂಡಿಯಲ್ಲಿ ಬಿದ್ದಿದ್ದ ಬಾಲಕನ ದೇಹ ಪತ್ತೆಯಾಗಿದೆ. ಬಾಲಕನನ್ನು ಹೊಸರಿತ್ತಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದ ವೇಳೆ ಬಾಲಕ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nirmala Aralikatti
PublicNext

PublicNext

02/08/2022 09:18 pm

Cinque Terre

38.47 K

Cinque Terre

0