ಕೊರಟಗೆರೆ: ರೈತನೋರ್ವ ಜಮೀನಿನಿಂದ ದನಗಳನ್ನ ಮೇಯಿಸಿಕೊಂಡು ವಾಪಸ್ ಮನೆಗೆ ಹಿಂದಿರುಗಿರುವಾಗ
ಕೆರೆಗೆ ನೀರು ಕುಡಿಸಿಕೊಂಡು ಬರಲು ಹೋದ ವ್ಯಕ್ತಿ ಆಕಸ್ಮಿಕವಾಗಿ ಕಾಲ ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಸಾವಿಗೀಡಾಗಿರುವ ಘಟನೆ ಕೊರಟಗೆರೆ ತಾಲೂಕು ಕೋಳಾಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಅವಗಡ ನಡೆ ದಿದ್ದು ಗ್ರಾಮದ ಮುತ್ತುರಾಜು ಮಗ ಕೆಂಪರಂಗಯ್ಯ (43 ) ಮೃತ ದುರ್ದೈವಿ.
ಶನಿವಾರ ಕೆರೆ ನೀರಿನಲ್ಲಿ ಮುಳುಗಿದ್ದು ಅಗ್ನಿಶಾಮಕ ದಳ ಮತ್ತುಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಶವ ಹುಡುಕುವ ಪ್ರಯತ್ನ ಮಾಡಿದರೂ ಇನ್ನೂ ಶವಪತ್ತೆಯಾಗಿಲ್ಲ, ಕೋಳಾಲ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸ್ಐಮಹಾಲಕ್ಷ್ಮಿಮ್ಮ ಸ್ಥಳಕ್ಕೆ ಭೇಟಿನೀಡಿ ತನಿಖೆ ನಡೆಸುತ್ತಿದ್ದಾರೆ.
PublicNext
26/07/2022 08:52 am