ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ಅಪಘಾತ, ಹೆಲ್ಮೆಟ್ ನಿಂದ ಉಳಿಯಿತು ಜೀವ : ಭಯಾನಕ ವಿಡಿಯೋ ವೈರಲ್

ಬ್ರೆಜಿಲ್ : ಬ್ರೆಜಿಲ್ ನಲ್ಲಿ ವ್ಯಕ್ತಿಯೊಬ್ಬ ಬಸ್ ಗೆ ಡಿಕ್ಕಿ ಹೊಡೆದ ಭೀಕರ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು ನೋಡುಗರ ಎದೆ ಝಲ್ ಎನ್ನುವಂತಿದೆ.

ಇನ್ನು ಬೈಕ್ ಸವಾರನನ್ನು ಕಾಪಾಡಿದ್ದು ಹೆಲ್ಮೆಟ್ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಪ್ರಾಣ ಉಳಿಸುವ ಹೆಲ್ಮೆಟ್ ಧರಿಸುವ ಬಗ್ಗೆ ಅದೆಷ್ಟು ಜಾಗೃತಿ ಮೂಡಿಸಿದರು ಜನ ಹೆಲ್ಮಟ್ ಹಾಕಲು ಅಸಡ್ಡೆ ತೋರುತ್ತಾರೆ. ಆದ್ರೆ ಕ್ಲೀನ್ ಆಗಿ ಈ ವಿಡಿಯೋ ನೋಡಿದವರು ಇನ್ಮುಂದೆ ಹೆಲ್ಮೆಟ್ ಹಾಕದೆ ಇರಲಾರರು.

ಇನ್ನು ದೃಶ್ಯದಲ್ಲಿ ಗಮನಿಸುವಂತೆ ಬೈಕ್ ಸವಾರ ಬಸ್ ಗೆ ಗುದ್ದಿದ ಪರಿಗೆ ಆತ ಬದುಕುಳಿಯುವುದೇ ಸಂಶಯವಾಗಿತ್ತು. ಆದರೆ ಆತ ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತವಾದ ಕ್ಷಣಾರ್ಧದಲ್ಲಿ ಎದ್ದು ಮುಂದೆ ನಡೆಯುವುದನ್ನು ಗಮನಿಸಿ ಅಲ್ಲಿ ಆತನಿಗೆ ಶ್ರೀರಕ್ಷೆಯಾಗಿದ್ದೇ ಹೆಲ್ಮೆಟ್. ಇಲ್ಲವಾದ್ರೆ ಬಸ್ ಗಾಲಿಯಡಿ ಸಿಲುಗಿದ ಆತನ ತಲೆ ಛಿದ್ರಗೊಂಡಿರುತಿತ್ತು.ಸಾವಿನ ಬಾಯಿಂದ ಮರಳಿ ಬರುವ ಈ ದೃಶ್ಯ ಎಲ್ಲರಿಗೂ ಮಾದರಿ.

Edited By : Nirmala Aralikatti
PublicNext

PublicNext

20/07/2022 08:42 am

Cinque Terre

134.5 K

Cinque Terre

4

ಸಂಬಂಧಿತ ಸುದ್ದಿ