ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರವಾಹದ ನೀರಿನಲ್ಲಿ ತೇಲಿ ಹೋದ ಶಾಲಾ ಬಸ್ : ವಿಡಿಯೋ ವೈರಲ್

ನವದೆಹಲಿ: ಮಳೆಗಾಲದಲ್ಲಿ ಎಷ್ಟೇ ಜಾಗೃತಿ ವಹಿಸಿದರು ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಅಂತಹದರಲ್ಲಿ ಕೆಲವರು ಹರಿಯುವ ನೀರಿನಲ್ಲಿ ದುಸ್ಸಾಹಸ ಮಾಡಲು ಮುಂದಾಗಿ ಆಪತ್ತಿಗೆ ಸಿಲುಕಿಕೊಳ್ಳುತ್ತಾರೆ.ಸದ್ಯ ಉತ್ತರಾಖಂಡದ ಚಂಪಾವತ್ ನಲ್ಲಿ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಹೌದು ಮಂಗಳವಾರ ಬೆಳಗ್ಗೆ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಹೋಗುತ್ತಿದ್ದ ಶಾಲಾ ಬಸ್ ಇಲ್ಲಿನ ಪೂರ್ಣಗಿರಿ ರಸ್ತೆಯ ಕಿರೋಡ ಚರಂಡಿಯಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ.

ನೀರಿನ ಹೊಡೆತಕ್ಕೆ ಸಿಲುಕಿದ ಬಸ್ ಉರುಳಿ ನದಿಗೆ ಬಿದ್ದಿದೆ. ಈ ಘಟನೆಯಲ್ಲಿಶಾಲಾ ಬಸ್ ಚಾಲಕ ಕಮಲೇಶ್ ಕರ್ಕಿ ಹಾಗೂ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಬಸ್ಸಿನಲ್ಲಿ ಶಾಲಾ ಮಕ್ಕಳಿರಲಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಸದ್ಯ ಶಾಲಾ ಬಸ್ ಅನ್ನು ಜೆಸಿಬಿ ಸಹಾಯದಿಂದ ನದಿಯಿಂದ ಹೊರತೆಗೆಯಲಾಯಿತು. ನದಿ ತುಂಬಿ ಹರಿಯುತ್ತಿರುವುದರಿಂದ ಪೂರ್ಣಗಿರಿ ರಸ್ತೆಯ ಸಂಚಾರವನ್ನು ಸದ್ಯಕ್ಕೆ ಬಂದ್ ಮಾಡಲಾಗಿದೆ.

Edited By : Nirmala Aralikatti
PublicNext

PublicNext

19/07/2022 02:21 pm

Cinque Terre

83.28 K

Cinque Terre

1

ಸಂಬಂಧಿತ ಸುದ್ದಿ