ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಪ್ರತ್ಯೇಕ ಅಪಘಾತಗಳಲ್ಲಿ 32 ಕುರಿಗಳ ಸಾವು

ದಾವಣಗೆರೆ: ಎರಡು ಪ್ರತ್ಯೇಕ ಅಪಘಾತದಲ್ಲಿ 32 ಕುರಿಗಳು ಮೃತಪಟ್ಟು 15 ಕುರಿಗಳು ಗಾಯಗೊಂಡ ಘಟನೆ ಹರಪನಹಳ್ಳಿ ಹೊರವಲಯದ ಹಡಗಲಿ ರಸ್ತೆಯ ಟೋಲ್ ಪ್ಲಾಜಾ ಬಳಿ ನಡೆದಿದೆ.

ಹರಪನಹಳ್ಳಿಯಿಂದ ಹಡಗಲಿ ಕಡೆ ಹೊರಟಿದ್ದ ಕಾರಿಗೆ ಸಿಲುಕಿ 12 ಕುರಿಗಳು ಸಾವನ್ನಪ್ಪಿವೆ. ಸ್ವಲ್ಪ ಸಮಯದ ನಂತರ ಹಡಗಲಿಯಿಂದ ಹರಪನಹಳ್ಳಿ ಕಡೆ ಬರುತ್ತಿದ್ದ ಸಾರಿಗೆ ಬಸ್‌ಗೆ ಸಿಲುಕಿ 20 ಕುರಿಗಳು ಮೃತಪಟ್ಟಿವೆ. ಹೀಗೆ 32 ಕುರಿಗಳು ಸಾವಿಗೀಡಾಗಿವೆ. 15ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ಇವು ಪಟ್ಟಣದ ಕುರುಬರಗೇರಿಯ 12ನೇ ವಾರ್ಡಿನ ಚಿಗರಿ ಯಲ್ಲಪ್ಪ ಎಂಬುವವರಿಗೆ ಸೇರಿದ್ದವಾಗಿವೆ. ಹರಪನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

12/07/2022 11:40 am

Cinque Terre

44.93 K

Cinque Terre

8

ಸಂಬಂಧಿತ ಸುದ್ದಿ