ಬೆಳಗಾವಿ: ಚಾಲಕ ನಿಯಂತ್ರಣ ತಪ್ಪಿ ಕಾಲುವೆಗೆ ಕಾರೊಂದು ಬಿದ್ದು, ಇಬ್ಬರು ಮೃತಪಟ್ಟಿರುವ ದುರ್ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ನಡೆದಿದೆ.
ರಡ್ಡೇರಹಟ್ಟಿ ಗ್ರಾಮದ ನಿವಾಸಿಗಳಾದ ಮಹಾದೇವ ಚಿಗರಿ (26) ಮತ್ತು ಸುರೇಶ ಬಡಚಿ (27) ಮೃತ ದುರ್ದೈವಿಗಳು. ಕರಿಮಸೂತಿ ಏತ ನೀರಾವರಿ ಕಾಲುವೆಗೆ ಕಾರು ಬಿದ್ದು ಈ ದುರಂತ ಸಂಭವಿಸಿದೆ. ಎಂಹೆಚ್ 05-ಎಬಿ 6674 ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವಿಗೆ ಕಾರು ಬಿದ್ದಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಘಟನಟ್ಟಿ ಗ್ರಾಮದ ಶ್ರೀಕಾಂತ ನಡುವಿನಮನಿ ಎಂಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ, ಕ್ರೇನ್ ಮೂಲಕ ಕಾರು ಹಾಗೂ ಮೃತ ಯುವಕರನ್ನು ಹೊರತೆಗೆದಿದ್ದಾರೆ.
PublicNext
08/07/2022 05:30 pm