ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮುದ್ರಪಾಲಾದ ಇಬ್ಬರು ಯುವಕರು : ಮುಂದುವರೆದ ಶೋಧ ಕಾರ್ಯ

ಕಾರವಾರ: ಅವರೆಲ್ಲ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಮುರುಡೇಶ್ವರಕ್ಕೆ ಬಂದಿದ್ದ ಸ್ನೇಹಿತರು. ಹೀಗೆ ಒಟ್ಟು 12 ಜನ ಫ್ರೆಡ್ಸ್ ಬಂದಿದ್ದು ಗುರುವಾರ ಸಂಜೆ ಈಜಲು ಸಮುದ್ರಕ್ಕೆ ಇಳಿದಿದ್ದ ವೇಳೆ ಇಬ್ಬರು ಯುವಕರು ಕಣ್ಮರೆಯಾಗಿದ್ದಾರೆ.

ಹೌದು ಮುರುಡೇಶ್ವರ ಕಡಲತೀರದಲ್ಲಿ ಇಬ್ಬರು ಪ್ರವಾಸಿಗರು ನೀರುಪಾಲಾದ ಘಟನೆ ನಡೆದಿದೆ. ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗಿದ್ದ ಐವರಲ್ಲಿ ಮೂವರನ್ನ ರಕ್ಷಣೆ ಮಾಡಲಾಗಿದ್ದು, ಅಬ್ರಾರ್ ಶೇಖ್ (21), ಸುಶಾಂತ್ ಎಂ.ಎಸ್ (23) ಕಣ್ಮರೆಯಾಗಿರುವ ಪ್ರವಾಸಿಗರು.

ನೀರಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳಿಗೆ ಸಿಕ್ಕು ಸಮುದ್ರಪಾಲಾಗಿದ್ದಾರೆ. ನಾಪತ್ತೆಯಾದ ಯುವಕರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

10/06/2022 01:25 pm

Cinque Terre

36.45 K

Cinque Terre

0

ಸಂಬಂಧಿತ ಸುದ್ದಿ