ಬಾಗಲಕೋಟೆ: ಸಿಡಿಲು ಬಡಿದು ಬಾಗಲಕೋಟೆ ಮೂಲದ ಬಿಎಸ್ಎಫ್ ಯೋಧ ಸಾವನ್ನಪ್ಪಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಅಶೋಕ ಮುಂಡಾಸ್ (41) ಮೃತ ಬಿಎಸ್ಎಫ್ ಯೋಧ. ನಿನ್ನೆ ರಾತ್ರಿ 12 ಗಂಟೆಗೆ ಅವಘಡ ಸಂಭವಿಸಿದೆ. ನಾಳೆ ಬೆಳಗ್ಗೆ ಯೋಧನ ಪಾರ್ಥೀವ ಶರೀರ ಗ್ರಾಮಕ್ಕೆ ಬರುವ ಸಾಧ್ಯತೆ ಇದೆ.
ಅಶೋಕ ಅವರು ಬಿಎಸ್ಎಫ್ 31 ಬಟಾಲಿಯನ್ನಲ್ಲಿ ಅಸ್ಸಾಂ ರಾಜ್ಯ ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಿಎಸ್ಎಫ್ನಲ್ಲಿ 16 ವರ್ಷದಿಂದ ಸೇವೆಯಲ್ಲಿಸುತ್ತಿದ್ದ ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
PublicNext
05/06/2022 09:53 am