ಥಾಣೆ (ಮಹಾರಾಷ್ಟ್ರ): ಸಿಕ್ಕಿಂನಲ್ಲಿ ರಸ್ತೆಯಿಂದ ಕಾರು ಸ್ಕಿಡ್ ಆಗಿ 500 ಅಡಿ ಕಮರಿಗೆ ಬಿದ್ದ ಪರಿಣಾಮ ಮಹಾರಾಷ್ಟ್ರದ ಥಾಣೆಯ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇವರು ಉತ್ತರ ಸಿಕ್ಕಿಂನ ಜನಪ್ರಿಯ ಪ್ರವಾಸಿ ತಾಣವಾದ ಲಾಚುಂಗ್‌ಗೆ ಹೋಗುತ್ತಿದ್ದರು ಎನ್ನಲಾಗಿದೆ. ಇಲ್ಲಿಂದ 13 ಕಿಮೀ ದೂರದಲ್ಲಿರುವ ಖೇದುಮ್ ಭಿರ್‌ನಲ್ಲಿ ಶನಿವಾರ 8.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸುರೇಶ್ ಪುನಮಿಯಾ (38), ಅವರ ಪತ್ನಿ ತೋರಲ್ ಪುನಮಿಯಾ (37), ಅವರ ಪುತ್ರಿ ದೇವಾಂಶಿ (10), ಮಗ ಹಿರಾಲ್ (14), ಸಂಬಂಧಿ ಜಯಂ ಪರ್ಮಾರ್ (13), ಮತ್ತು ಚಾಲಕ ಸೋಮಿ ಎಂದು ಗುರುತಿಸಲಾಗಿದೆ.
ಇನ್ನೂ, ಘಟನಾ ಸ್ಥಳಕ್ಕೆ ಆಗಮಿಸಿದ ಸಿಕ್ಕಿಂ ಪೊಲೀಸರು, ಸೇನಾ ಸಿಬ್ಬಂದಿ ಮತ್ತು ಸ್ಥಳೀಯ ಹೋಟೆಲ್‌ಗಳ ಸಿಬ್ಬಂದಿ ಭಾನುವಾರ ಶವಗಳನ್ನು ಹೊರತೆಗೆದಿದ್ದಾರೆ.
PublicNext
30/05/2022 12:36 pm