ಖಠ್ಮಂಡು : ಖಾಸಗಿ ಏರ್ ಲೈನ್ಸ್ ಗೆ ಸೇರಿದ್ದ ನಾಲ್ವರು ಭಾರತೀಯರು ಸೇರಿದಂತೆ 19 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಅನೆಪಾಲಿಸ್ ವಿಮಾನವು ನಾಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಟ್ವಿನ್-ಎಂಜಿನ್ ವಿಮಾನ- ತಾರಾ ಏರ್ ನ 9 NAET- ಭಾನುವಾರ ಬೆಳಿಗ್ಗೆ 9:55 ಕ್ಕೆ ಪೋಖರಾದಿಂದ ಜೋಮ್ಸಮ್ ಗೆ ಹಾರಾಟ ನಡೆಸಿತ್ತು. ವಾಯು ಮಾರ್ಗದ ನಡುವೆಯೇ ಗ್ರೌಂಡ್ ಸಪೋರ್ಟ್ ಜೊತೆ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ವಿಮಾನದ ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ.
ನಾಪತ್ತೆಯಾದ ವಿಮಾನದಲ್ಲಿ 4 ಭಾರತೀಯ ಮತ್ತು 3 ಜಪಾನ್ ಪ್ರಜೆಗಳಿದ್ದರು. ಉಳಿದ ಪ್ರಯಾಣಿಕರು ನೇಪಾಳಿ ಪ್ರಜೆಗಳಾಗಿದ್ದು, ವಿಮಾನದಲ್ಲಿ 3 ಸಿಬ್ಬಂದಿ ಇದ್ದರು ಎಂದು ಎಎನ್ ಐ ವರದಿ ಮಾಡಿದೆ.
PublicNext
29/05/2022 12:11 pm