ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ ತಾಲೂಕು ಕಚೇರಿ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬೇಸತ್ತ ವ್ಯಕ್ತಿ ಡೀಸಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ!

ಹೊಸಕೋಟೆ: ಕಳೆದ ಆರು ತಿಂಗಳಿಂದ ಮ್ಯುಟೇಷನ್ ಗೆ ಅರ್ಜಿ ಸಲ್ಲಿಸಿ ಕೋಲಾರ ತಾಲೂಕು ಕಚೇರಿಗೆ ಅಲೆದು ಅಲೆದು ವ್ಯಕ್ತಿಯೊಬ್ಬ ಬೇಸತ್ತಿದ್ದ. ಅದೇನಾಯ್ತೋ ಏನೊ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನನೊಂದು ನಾಲ್ಕು ಲೀಟರ್ ಡೀಸೆಲ್‌ ನ ಮೈಮೇಲೆ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯಗೆ ಯತ್ನಿಸಿದ ಘಟನೆ ಕೋಲಾರ ನಗರದ ತಾಲೂಕು ಕಚೇರಿ ಆವರಣದಲ್ಲಿಂದು ನಡೆದಿದೆ.

ಡೀಸೆಲ್ ಸುರಿದುಕೊಂಡು ಇನ್ನೇನು ಬೆಂಕಿ ಹಚ್ಚಿಕೊಳ್ಳಬೇಕು ಎನ್ನುವಷ್ಟರಲ್ಲಿ ಜನ ಬೆಂಕಿಪೊಟ್ಟಣ ಕಸಿದುಕೊಂಡು ಆತ್ಮಹತ್ಯೆ ದುರಂತವನ್ನು ತಪ್ಪಿಸಿದ್ದಾರೆ. ಕೋಲಾರ ತಾಲೂಕಿನ ಪುರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಡೀಸಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾತ. ಆದ ಅನ್ಯಾಯವನ್ನು ಆತನ ಮಾತುಗಳಲ್ಲೆ ಕೇಳಿ.

ರಾಯಣಸ್ವಾಮಿ ಕಳೆದ ಅನೇಕ ವರ್ಷಗಳಿಂದ ತಮ್ಮ ಜಮೀನಿನ ಹಳೆ ದಾಖಲೆಗಾಗಿ ಅಲೆದಾಡ್ತಿದ್ದ. ಕಳೆದ 6ತಿಂಗಳಿಂದ ಅಲೆದಾಡಿ ಸುಸ್ತಾಗಿದ್ದ. ನಾಳೆ ಬಾ, ನಾಳೆ ಬಾ ಎಂದು ಪ್ರತಿದಿನ ತಾಲೂಕು ಕಚೇರಿ ಸಿಬ್ಬಂದಿ ಸತಾಯಿಸುತ್ತಿದ್ರು.

ಮೊದಲಿಂದಲೂ ಕೋಲಾರ ತಾಲೂಕು ಕಚೇರಿಲಿ ಇದೆ ವಿಚಾರವಾಗಿ ಗಲಾಟೆ ನಡೆದು, ಇಂದು ಆತ್ಮಹತ್ಯೆ ಯತ್ನ ದುರಂತ ನಡೆದಿದೆ.

ಮನೆ, ಮಡದಿ ಮಕ್ಕಳು ಎಲ್ಲವನ್ನು ನಾರಾಯಣಸ್ವಾಮಿ ದೂರ ಮಾಡಿಕೊಳ್ಳಲು ನಿರ್ಧರಿಸಿದ್ದ. ಆತ ಈ ಸ್ಥಿತಿಗೆ ಬರಲು ಕಾರಣವಾದ ಕೋಲಾರ ತಾಲೂಕು ಕಚೇರಿ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ. ಇಲ್ಲವಾದರೆ ಇನ್ನೆಷ್ಟು ಜನ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಶಾಹಿ ವಿರುದ್ಧ ತಿರುಗಿಬೀಳಲಾಗದೆ ಒದ್ದಾಡುತ್ತಾರೆ ನೀವೆ ಯೋಚಿಸಿ. ನಾರಾಯಣಸ್ವಾಮಿ ಆತ್ಮಹತ್ಯೆ ಸಂಬಂಧ ಕೋಲಾರದ

ಗಲ್ ಪೇಟೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸುರೇಶ್ ಬಾಬು Public Next..ಹೊಸಕೋಟೆ.

Edited By : Nagesh Gaonkar
PublicNext

PublicNext

26/05/2022 10:58 pm

Cinque Terre

104.1 K

Cinque Terre

4