ರಾಯ್ಪುರ್ : ರಾಯ್ ಪುರದ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ ಗಳಾದ ಕ್ಯಾಪ್ಟನ್ ಪಾಂಡಾ ಮತ್ತು ಕ್ಯಾಪ್ಟನ್ ಶ್ರೀವಾಸ್ತವ ಸಾವನ್ನಪ್ಪಿದ್ದಾರೆ ಎಂದು ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಗುರುವಾರ ಹೇಳಿದ್ದಾರೆ. ಪೈಲಟ್ ಗಳು ಹೆಲಿಕಾಪ್ಟರ್ ಇಳಿಸಲು ಯತ್ನಿಸಿದ ಸಂದರ್ಭದಲ್ಲಿ ಹೆಲಿಕಾಪ್ಟರ್ ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಹೆಲಿಕಾಪ್ಟರ್ ನಲ್ಲಿದ್ದ ಇಬ್ಬರೂ ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಕರಿರಲಿಲ್ಲ.
ಮನ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ್ಪುರ್ ದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ಅಭ್ಯಾಸದ ವೇಳೆ ಈ ಘಟನೆ ನಡೆದಿದೆ.ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹೆಲಿಕಾಪ್ಟರ್ ದುರಂತದ ಬಗ್ಗೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆ ಸಂತಾಪ ವ್ಯಕ್ತಪಡಿಸಿದ್ದಾರೆ.
PublicNext
13/05/2022 08:57 am