ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಣಾಮುಚ್ಚಾಲೆ ಆಟ ತಂದ ಮಕ್ಕಳ ಸಾವು-ಐಸ್ ಕ್ರೀಮ್ ಬಾಕ್ಸ್‌ನಲ್ಲಿ ಶವ ಪತ್ತೆ

ಮೈಸೂರು: ಕಣ್ಣಾಮುಚ್ಚಾಲೆ ಆಡಲು ಹೋಗಿ ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ.

ನಾಗರಾಜು ಹಾಗೂ ಚಿಕ್ಕದೇವಮ್ಮ ಅವರ ಪುತ್ರಿ ಭಾಗ್ಯ (12) ಮತ್ತು ರಾಜನಾಯಕ ಹಾಗೂ ಗೌರಮ್ಮ ಅವರ ಪುತ್ರಿ ಕಾವ್ಯ (7) ಮೃತಪಟ್ಟಿದ್ದಾರೆ.

ಕಣ್ಣಾಮುಚ್ಚಾಲೆ ಆಡೋ ಸಮಯದಲ್ಲಿ ಇಲ್ಲಿಯೇ ಇದ್ದ ಐಸ್‌ ಕ್ರೀಮ್ ಬಾಕ್ಸ್ ನಲ್ಲಿ ಈ ಮಕ್ಕಳು ಬಚ್ಚಿಟ್ಟುಕೊಂಡಿದ್ದರು.ಆದರೆ ಅದನ್ನ ತೆಗೆದು ಹೊರಗೆ ಬರಲಾಗದೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮಕ್ಕಳಿಗಾಗಿಯೇ ಪೋಷಕರು ಕೆಲವು ಗಂಟೆ ಹುಡುಕಿದ್ದಾರೆ. ಅನುಮಾನ ಬಂದು ಐಸ್ ಕ್ರೀಮ್ ಬಾಕ್ಸ್ ತೆಗೆದಾಗಲೇ ಮಕ್ಕಳು ಮೃತಪಟ್ಟ ಸತ್ಯ ಗೊತ್ತಾಗಿದೆ.

Edited By :
PublicNext

PublicNext

27/04/2022 09:17 pm

Cinque Terre

117.23 K

Cinque Terre

7

ಸಂಬಂಧಿತ ಸುದ್ದಿ