ಮೊಬೈಲ್ ನಲ್ಲಿ ಮಾತನಾಡುತ್ತಾ ಮಹಿಳೆಯೊಬ್ಬರರು ಆಕಸ್ಮಿಕವಾಗಿ ಮ್ಯಾನ್ ಹೋಲ್ ಬಿದ್ದ ಘಟನೆಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಈ ಘಟನೆ ವರದಿಯಾಗಿದೆ. ಉತ್ಕರ್ಷ್ ಸಿಂಗ್ ಎಂಬ ಟ್ವೀಟಿಗರು ಈ ವಿಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ಫೋನ್ ನಲ್ಲಿ ಮಾತನಾಡುತ್ತಾ ವಾಹನದ ಹಿಂದೆ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಅದೇ ರಸ್ತೆಯೊಂದರಲ್ಲಿ ನಿಲ್ಲಿಸಿದ್ದ ರಿಕ್ಷಾವೊಂದು ಮುಂದೆ ಹೋಗುತ್ತದೆ. ಈ ವೇಳೆ ವಾಹನದ ಹಿಂದೆ ಬರುತ್ತಿದ ಮಹಿಳೆ ತೆರದ ಮ್ಯಾನ್ ಹೋಲ್ ಗೆ ಬೀಳುತ್ತಿರುವುದು ವಿಡಿಯೋದಲ್ಲಿದೆ.
ಮಹಿಳೆ ಮ್ಯಾನ್ ಹೋಲ್ ಗೆ ಬಿದ್ದ ತಕ್ಷಣ ಮಹಿಳೆಯನ್ನು ಹೊರತೆಗೆಯಲು ಸ್ಥಳೀಯರು ಧಾವಿಸಿದ್ದಾರೆ. ಮಹಿಳೆಯನ್ನು ಮೇಲೆತ್ತಿದ್ದಾರೆ.
ವಿಡಿಯೋ ನೋಡಿದ ಅನೇಕರು ಮೊಬೈಲ್ ಕೈಯಲ್ಲಿದ್ದರೇ ಜನ ಜಗತ್ತನೇ ಮರೆಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮ್ಯಾನ್ ಹೋಲ್ ಮುಚ್ಚಳ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
PublicNext
23/04/2022 12:06 pm