ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲಸ ಮಾಡುತ್ತಿದ್ದಾಗಲೇ ಸ್ಫೋಟಗೊಂಡ ಲ್ಯಾಪ್​ಟಾಪ್- ಯುವತಿ ಸ್ಥಿತಿ ಚಿಂತಾಜನಕ.!

ವಿಜಯವಾಡ: ಕೆಲಸ ಮಾಡುತ್ತಿದ್ದಾಗಲೇ ಲ್ಯಾಪ್​ಟಾಪ್​ ಸ್ಫೋಟಗೊಂಡು ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ವೈಎಸ್‌ಆರ್​ ಜಿಲ್ಲೆಯ ಬಿ. ಕೋಡೂರು ಮಂಡಲದ ಮೇಕವಾರಿಪಲ್ಲಿ ಗ್ರಾಮದಲ್ಲಿ ಪ್ರಕರಣ ನಡೆದಿದೆ.

ಸುಮತಿ ಗಾಯಗೊಂಡ ಯುವತಿ. ಸಾಫ್ಟ್​ವೇರ್ ಕಂಪನಿವೊಂದರಲ್ಲಿ ಸುಮತಿ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ಲ್ಯಾಪ್​ಟಾಪ್​ ಚಾರ್ಜ್ ಮಾಡಲು ಇಟ್ಟು ಅದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಲ್ಯಾಪ್‌ಟಾಪ್‌ ಸ್ಫೋಟಗೊಂಡು ಗಾಯಗೊಂಡಿದ್ದಾರೆ.

ಯುವರಿ ಸುಮತಿ ಕೆಲಸ ಮಾಡುತ್ತಿದ್ದ ವೇಳೆ ರೂಮ್‌ಗೆ ಲಾಕ್ ಮಾಡಿಕೊಂಡಿದ್ದರು. ಇದರಿಂದಾಗಿ ಅವರನ್ನು ರಕ್ಷಣೆ ಮಾಡುವಲ್ಲಿ ಸ್ವಲ್ಪ ತಡವಾಯಿತು. ಇತ್ತ ರೂಮ್‌ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸುಮತಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Edited By : Vijay Kumar
PublicNext

PublicNext

18/04/2022 05:34 pm

Cinque Terre

36.7 K

Cinque Terre

0

ಸಂಬಂಧಿತ ಸುದ್ದಿ