ಬೀದರ್ : ಚಿಟಗುಪ್ಪ ತಾಲೂಕ ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಇರುವ ಮೂರು ಅಂಗಡಿಗಳಿಗೆ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು 3 ಸಂಪೂರ್ಣವಾಗಿ ಅಂಗಡಿಗಳು ಭಸ್ಮವಾಗಿವೆ.
ಅಂಗಡಿಯ ಒಳಗಡೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿದ್ದರಿಂದ ಶಿವಕುಮಾರ ಪಾಟೀಲ್ ಅವರ ಆಟೊಮೊಬೈಲ್ ಅಂಗಡಿ, ಹೊಟೇಲ್, ದ್ವಿಚಕ್ರ ವಾಹನ ದುರಸ್ತಿ ಅಂಗಡಿ ಸೇರಿ ಒಟ್ಟು ಮೂರು ಅಂಗಡಿಗಳಲ್ಲಿಯ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಅಪಾರ ಪ್ರಮಾಣದ ಬೆಲೆ ಬಾಳುವ ಆಸ್ತಿ ಭಸ್ಮವಾಗಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಅಂಗಡಿಗಳಿಂದ ಸ್ವಲ್ಪ ದೂರದಲ್ಲಿಯೇ ಇದ್ದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಅಂಗಡಿಗಳು ಟಿನ್ ಶೆಡ್ಡಿನಿಂದ ನಿರ್ಮಿಸಿದ್ದರಿಂದ ಸುಟ್ಟು ಕರಕಲಾಗಿವೆ.ಆಕಾಶದೆಲ್ಲೆಡೆ ಕೆಂಪು ಹೋಗೆ ಆವರಿಸಿದ್ದರಿಂದ ಪಟ್ಟಣದ ನಾಗರಿಕರೂ ಭಯದಿಂದ ಓಡಿ ಬರುತ್ತಿರುವ ದೃಶ್ಯ ಕಂಡು ಬಂತು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
PublicNext
16/04/2022 08:25 pm