ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ತವರೂರಲ್ಲಿ ಕೆಮಿಕಲ್ ಫ್ಯಾಕ್ಟರಿ ಸ್ಪೋಟ-6 ಜನ ಡೆಡ್ !

ಗಾಂಧಿನಗರ: ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ರಾಸಾಯನಿಕ ಕಾರ್ಖಾನೆಯೊಂದು ಸ್ಪೋಟಗೊಂಡಿದೆ. ಇದರ ಪರಿಣಾಮ 6 ಜನ ಕಾರ್ಮಿಕರು ಮೃತಪಟ್ಟಿದ್ದಾರೆ.

ದಹೇಜ್ ಕೈಗಾರಿಕಾ ಪ್ರದೇಶದಲ್ಲಿರೋ ಕಾರ್ಖಾನೆಯಲ್ಲಿ ಬೆಳಗ್ಗೆ 3 ಗಂಟೆ ಹೊತ್ತಿಗೆ ಈ ಘಟನೆ ಸಂಭವಿಸಿದ್ದು, ದ್ರಾವಕ ಬಟ್ಟಿ ಇಳಿಸುವಿಕೆ ಪ್ರಕ್ರಿಯೆ ಸಮಯದಲ್ಲಿಯೇ ಸಡನ್ ಆಗಿಯೇ ಸ್ಪೋಟ ಸಂಭವಿಸಿದೆ.

ಈ ಸ್ಪೋಟದಿಂದ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲಸ ಮಾಡುತ್ತಿದ್ದ 6 ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಬೆಂಕಿ ನಂದಿಸಲಾಗಿದೆ. ಮೃತದೇಹವನ್ನೂ ಹೊರೆಗೆ ತೆಗೆಯಲಾಗಿದೆ.

ಮರಣೋತ್ತರ ಪರೀಕ್ಷೆಗೂ ಕಳಿಸಲಾಗಿದೆ. ಇಷ್ಟು ಬಿಟ್ಟರೇ ಮತ್ಯಾರೂ ಗಾಯಗೊಂಡಿಲ್ಲ ಎಂದು ಭರೂಚ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ಹೇಳಿದ್ದಾರೆ.

Edited By :
PublicNext

PublicNext

11/04/2022 01:57 pm

Cinque Terre

82.61 K

Cinque Terre

0

ಸಂಬಂಧಿತ ಸುದ್ದಿ