ವಿಜಯನಗರ ಜಿಲ್ಲೆ: ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ AC ಸ್ಪೋಟಗೊಂಡಿದೆ. ಇದರ ಪರಿಣಾಮ ನಾಲ್ವರು ಸಾವನೊಪ್ಪಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಈ ಘಟನೆ ನಡೆದಿದೆ.
ಈ ಸ್ಪೋಟದಲ್ಲಿ ಇಬ್ಬರು ಮಕ್ಕಳು ಮತ್ತು ಪತಿ-ಪತ್ನಿ ಸಾವನೊಪ್ಪಿದ್ದಾರೆ. ಅದೃಷ್ಟವಶಾತ್ ಒಬ್ಬರು ಬಚಾವ್ ಆಗಿದ್ದಾರೆ. ಮೃತರನ್ನ ವೆಂಕಟ್ ಪ್ರಶಾಂತ್ (42) ಡಿ.ಚಂದ್ರಕಲಾ (38) ಹಾಗೂ ಎಚ್.ಎ.ಅರ್ದ್ವಿಕ್ (16) ಪ್ರೇರಣಾ (8) ಸಜೀವ ದಹನವಾಗಿದ್ದಾರೆ.
ರಾಘವೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿಯೇ ಈ ಘಟನೆ ನಡೆದಿದೆ. ರಾಘವೇಂದ್ರ ಅವರ ಪತ್ನಿ ರಾಜಶ್ರೀ ಮನೆಯಿಂದ ಹೊರ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ತಡರಾತ್ರಿ ಈ ಘಟನೆ ಸಂಭವಿಸಿದೆ.ಸದ್ಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಮೃತ ದೇಹಗಳನ್ನ ರವಾನಿಸಲಾಗಿದೆ.
PublicNext
08/04/2022 08:08 am