ಭುವನೇಶ್ವರ: 2 ಟ್ರಕ್‌ಗಳ ನಡುವೆ ಸಿಲುಕಿದ ಕಾರು ನಜ್ಜುಗುಜ್ಜಾಗಿ ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರ್‌ನಲ್ಲಿ ನಡೆದಿದೆ.
ಭುವನೇಶ್ವರ್‌ನ ಪಲಸುನಿ ಪ್ರದೇಶದಲ್ಲಿ ಎನ್‌ಎಚ್ -16ರಲ್ಲಿ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದ ನಂತರ ಎರಡು ಟ್ರಕ್‌ಗಳ ನಡುವೆ ಕಾರು ನಜ್ಜುಗುಜ್ಜಾಗಿದೆ. ವರದಿಗಳ ಪ್ರಕಾರ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ. ಕಾರಿಗೆ ಡಿಕ್ಕಿ ಹೊಡೆಯುವ ಮೊದಲು ಟ್ರಕ್ ಮತ್ತೊಂದು ಕಾರು ಮತ್ತು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
05/04/2022 07:49 am