ಯಾದಗಿರಿ: ವಿದ್ಯುತ್ ಆಘಾತದಿಂದ ಕುರಿಗಾಹಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರೋ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಚಗುಂಡಾಳ ಗ್ರಾಮದ ಹೊರವಲಯದ ಜಮೀನಿನಲ್ಲಿ ಸಂಭವಿಸಿದೆ. ಸಿದ್ದಪ್ಪ(17) ನೀರು ಕುಡಿಯಲು ಹೊಂಡಕ್ಕೆ ಹೋಗಿದ್ದಾಗ ವಿದ್ಯುತ್ ತಂತಿ ಸ್ಪರ್ಶವಾಗಿ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಜಮೀನಿನಲ್ಲಿ ಕುರಿ ಕಾಯುತ್ತಿರುವ ವೇಳೆ ದಾಹವಾಗಿದ್ದರಿಂದ ಹೊಂಡಕ್ಕೆ ನೀರು ಕುಡಿಯಲು ಯುವಕ ಹೋಗಿದ್ದಾಗ ವಿದ್ಯುತ್ ತಗುಲಿದೆ. ಸಿದ್ದಪ್ಪನ ರಕ್ಷಣೆಗಾಗಿ ತೆರಳಿದ ಇಬ್ಬರು ಯುವಕರಿಗೂ ಆಗ ವಿದ್ಯುತ್ ತಗುಲಿದ್ದು, ಸುರಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
PublicNext
29/03/2022 05:25 pm