ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ನಿಂತ ಕ್ಯಾಂಟರ್ ಗೆ ಕಾರ್ ಡಿಕ್ಕಿ-ಮಗಳು ಸೇರಿ ಖ್ಯಾತ ವೈದ್ಯ ದಂಪತಿ ಡೆಡ್

ಬೆಳಗಾವಿ: ರಸ್ತೆ ಪಕ್ಕ ನಿಂತಿದ್ದ ಕ್ಯಾಂಟರ್‌ಗೆ ವೈದ್ಯ ದಂಪತಿ ಸಂಚರಿಸುತ್ತಿದ್ದ ಕಾರು ಗುದ್ದಿದೆ. ಇದರಿಂದ ಮೂವರು ಮೃತ ಪಟ್ಟ ಘಟನೆ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದ ಬಳಿ ಸಂಭವಿಸಿದೆ.

ಮೃತರನ್ನ ಡಾ.ಶ್ವೇತಾ ಎಸ್.ಮುರಗೋಡ (40) ಪುತ್ರಿ ಶಿಯಾ ಮುರಗೋಡ (7) ಎಂದು ಗುರುತಿಸಲಾಗಿದೆ. ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖ್ಯಾತ ನೇತ್ರ ತಜ್ಞ ಡಾ.ಸಚಿನ್ ಮುರಗೋಡ ಅವರನ್ನ ಕೆಎಸ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಬೆಳಗಾವಿಯಿಂದ ಸಂಕೇಶ್ವರ್ ಪಟ್ಟಣ್ಣಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ. ಪುಣೆ-ಬೆಂಗಳೂರು ಹೆದ್ದಾರಿ ರಸ್ತೆ ಪಕ್ಕ ನಿಂತಿದ್ದ ಕ್ಯಾಂಟರ್‌ಗೆ ವೈದರ ಕಾರ್ ಡಿಕ್ಕಿ ಹೊಡೆದಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಫಘಾತ ಸಂಭವಿಸಿದೆ.

Edited By :
PublicNext

PublicNext

14/03/2022 08:12 am

Cinque Terre

42.35 K

Cinque Terre

0

ಸಂಬಂಧಿತ ಸುದ್ದಿ