ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿನಿ ಟ್ರಕ್‌ಗೆ ಕಾರು ಡಿಕ್ಕಿ: 6 ಮಂದಿ ಸಾವು, ನಾಲ್ವರಿಗೆ ಗಂಭೀರ ಗಾಯ

ಲಕ್ನೋ: ಕಾರೊಂದು ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮೈನ್‌ಪುರಿ - ಇಟಾವಾದ ಹೆದ್ದಾರಿಯ ಸೆಫಾಯಿ ಪೊಲೀಸ್ ವೃತ್ತದ ಬಳಿ ನಡೆದಿದೆ.

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಜಸ್ವಂತನಗರ ಪೊಲೀಸ್ ವೃತ್ತದ ನಿವಾಸಿಗಳಾದ ಮಂಜಿತ್ (27), ಸದಾನ್ (23), ಬ್ರಜ್ಮೋಹನ್( 23), ವಿಶೇಷ್( 25) ಕರಣ್ (29), ಮತ್ತು ವಿಪಿನ್ (24) ಎಂದು ಮೃತ ದುರ್ದೈವಿಗಳು. ಗಾಯಾಳುಗಳನ್ನು ಸೆಫಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಮಂಜಿತ್ ಸೇರಿದಂತೆ ಎಲ್ಲರೂ ಮದುವೆಯ ಫೋಟೋ ತೆಗೆಯಲು ಕಾರಿನಲ್ಲಿ ತೆರಳುತ್ತಿದ್ದರು. ಕಾರಿನ ಟೈರ್ ಸವೆದಿದ್ದರಿಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿಗೆ ಬರುತ್ತಿದ್ದ ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

10/03/2022 08:49 am

Cinque Terre

39.09 K

Cinque Terre

0

ಸಂಬಂಧಿತ ಸುದ್ದಿ