ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ್: ನೋಡ್ ನೋಡ್ತಾನೆ ರೈಲು ಬಂತು ಪ್ರಯಾಣಿಕನ ಬಲಿ ಪಡೀತು!

ಕೋಲಾರ್: ಮಾಲೂರು ತಾಲೂಕಿನ ಟೇಕಲ್ ರೈಲು ನಿಲ್ದಾಣದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಇದರ ಪರಿಣಾಮ ಓರ್ವ ಪ್ರಯಾಣಿಕ ಸಾವನೊಪ್ಪಿರೋ ಘಟನೆ ಇಂದು ನಡೆದಿದೆ.

ಸಿಗ್ನಲ್ ಸಮಸ್ಯೆಯಿಂದ ಬೆಂಗಳೂರು ಮಾರಿಕುಪ್ಪಂ ಸ್ವರ್ಣ ಪ್ಯಾಸೆಂಜರ್ ರೈಲು ಟೇಕಲ್ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಿತ್ತು. ಆಗ ರೈಲಿನಲ್ಲಿದ್ದ ಪ್ರಯಾಣಿಕರು ರೈಲಿನಿಂದ ಇಳಿದು ಟ್ರಾಕ್ ಗಳ ಮೇಲೆ ಹಾಗೂ ಪ್ಲಾಟ್ ಫಾರಂ ಗಳ ಮೇಲೆ ಕುಳಿತಿದ್ದರು.

ಈ ವೇಳೆ ಏಕಾಏಕಿ ಬಂದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಅಲ್ಲಿದ್ದ ಜನರಲ್ಲಿ ಗಾಬರಿ ಹುಟ್ಟಿಸಿದೆ. ಆಗ ಚೆಲ್ಲಾಪಿಲ್ಲಿಯಾಗಿ ಜನರು ಓಡಿದ್ದಾರೆ. ಈ ವೇಳೆ ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ ಶಹಬಾಜ್ ಅಹಮದ್ ಎಂಬಾತ ರೈಲಿಗೆ ಸಿಕುಕಿ ಸಾವನ್ನಪ್ಪಿದ್ದು, ಹತ್ತಾರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಕಂಟ್ರೋನ್ಮೆಂಟ್ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By :
PublicNext

PublicNext

09/03/2022 02:03 pm

Cinque Terre

72.65 K

Cinque Terre

0

ಸಂಬಂಧಿತ ಸುದ್ದಿ