ಮೈಸೂರು: ಮೈಸೂರಿನ ಯಾದವಗಿರಿಯಲ್ಲಿರುವ ರೈಲ್ವೆ ಕ್ವಾಟ್ರಸ್ ನಲ್ಲಿ ಕ್ಲೋರಿನ್ ಅನಿಲ ಲೀಕ್ ಆಗಿದ್ದು 20 ಕ್ಕೂ ಹೆಚ್ಚು ಜನ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ.
ಸದ್ಯ ತೀರಾ ಅಸ್ವಸ್ಥರಾದವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸಕಾಲ ರೈಲ್ವೆ ಕ್ವಾಟ್ರಸ್ ನಿವಾಸಿಗಳಲ್ಲಿ ಆತಂಕ ಮೂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಸೋರಿಕೆಯನ್ನು ತಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು ಕೆ ಆರ್ ಎಸ್ ರಸ್ತೆ ಬಂದ್ ಮಾಡಲಾಗಿತ್ತು.
PublicNext
07/03/2022 07:52 pm