ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಭೀಕರ ರಸ್ತೆ ಅಪಘಾತದಲ್ಲಿ ಕಾನ್ಸ್​ಟೇಬಲ್​​ ​ಸಾವು

ತುಮಕೂರು: ಬೈಕ್​ ಮತ್ತು ಕೆಎಸ್​​ಆರ್​ಟಿಸಿ ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್​ ಸವಾರ (ಪೊಲೀಸ್​ ಕಾನ್ಸ್​ಟೇಬಲ್​​ ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿರಾ ತಾಲೂಕಿನ ಶಾಗದಡು ಗ್ರಾಮದ ಬಾಲಕೃಷ್ಣ (33) ಸಾವಿಗೀಡಾದ ಪೊಲೀಸ್​ ಕಾನ್ಸ್​ಟೇಬಲ್​​ ​​​​ಎಂದು ತಿಳಿದು ಬಂದಿದೆ. ತುಮಕೂರಿನ ಕ್ಯಾತ್ಸಂದ್ರ ಬಳಿ, ಬೈಕ್​ ಮತ್ತು ಕೆಎಸ್​​ಆರ್​ಟಿಸಿ ಬಸ್ ಮುಖಾಮುಖಿಗೊಂಡಿವೆ. ಡಿಕ್ಕಿಯಾದ ರಭಸಕ್ಕೆ ಪೊಲೀಸ್​ ಕಾನ್ಸ್‌ಟೇಬಲ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಾಲಕೃಷ್ಣ ಕೋಲಾರ ಜಿಲ್ಲೆಯ ಕೆಜಿಎಫ್​ ಠಾಣೆಯಲ್ಲಿ ಕಾನ್ಸ್​ಟೇಬಲ್​​ ​ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ವಂತ ಕೆಲಸದ ನಿಮಿತ್ತ ತುಮಕೂರಿಗೆ ಬಂದು ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

01/03/2022 06:01 pm

Cinque Terre

39.52 K

Cinque Terre

1

ಸಂಬಂಧಿತ ಸುದ್ದಿ