ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿಹರದ ಬೆಳ್ಳೂಡಿ ಬಳಿ ಭೀಕರ ಅಪಘಾತ: ಮೂವರು ಸಾವು, ಏಳು ಮಂದಿಗೆ ಗಾಯ

ದಾವಣಗೆರೆ: ಆಟೋ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಹರಿಹರ ತಾಲೂಕಿನ ಬೆಳ್ಳೂಡಿ ಬಳಿಯ ಹರಿಹರ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಳ್ಳೂಡಿ ಗ್ರಾಮದ ಯುವಕರಾದ ಅನಿಲ್, ಬಸವರಾಜ್ ಹಾಗೂ ನಾಗೇನಹಳ್ಳಿ ಗ್ರಾಮದ ಹನುಮಂತಪ್ಪರ ಪತ್ನಿ 65 ವರ್ಷದ ಚಂದ್ರಮ್ಮ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಚಂದ್ರಮ್ಮ ಸ್ಥಳದಲ್ಲಿ ಸಾವನ್ನಪ್ಪಿದರೆ ಅನಿಲ್ ಕುಮಾರ್ ಹಾಗೂ ಬಸವರಾಜ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಲೇಬೆನ್ನೂರಿನಿಂದ ಹರಿಹರ ಕಡೆಗೆ ಟ್ರ್ಯಾಕ್ಟರ್ ಬರುತಿತ್ತು. ಹರಿಹರದಿಂದ ಬೆಳ್ಳೂಡಿಗೆ ಆಟೋ ಹೋಗುತಿತ್ತು‌. ಈ ವೇಳೆ ಮಾರ್ಗಮಧ್ಯೆ ಪಂಚಮಸಾಲಿ ಪೀಠದ ಸಮೀಪ ಅಪಘಾತವಾಗಿದೆ. ಅಪಘಾತದ ಶಬ್ಧ ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.

Edited By : Nagaraj Tulugeri
PublicNext

PublicNext

27/02/2022 10:02 am

Cinque Terre

61.75 K

Cinque Terre

0

ಸಂಬಂಧಿತ ಸುದ್ದಿ