ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಕ್ನಿಕ್ ಹೊರಟ ಟೆಂಪೋ ಟ್ರಾವೆಲ್ಸ್ ಪಲ್ಟಿ-15 ಮಕ್ಕಳಿಗೆ ಗಂಭೀರ ಗಾಯ-ಕ್ಲಿನರ್ ಡೆಡ್

ವಿಜಯಪುರ: ಸರ್ಕಾರಿ ಶಾಲಾ ಮಕ್ಕಳು ಪಿಕ್ನಿಕ್ ಹೊರಟ್ಟಿದ್ದ ಟೆಂಪೋ ಟ್ರಾವೆಲ್ಸ್ ಪಲ್ಟಿ ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಕ್ಲಿನರ್ ಸಾವುನೊಪ್ಪಿದ್ದಾನೆ. ಈ ಘಟನೆ ತಾಳಿಕೋಟಿ ತಾಲೂಕಿನ ಕೂಚಬಾಳ-ಬಾವೂರ್ ಮಧ್ಯೆ ಸಂಭವಿಸಿದೆ.

ಮುವತ್ತಕ್ಕೂ ಹೆಚ್ಚು ಮಕ್ಕಳನ್ನ ಹೊತ್ತುಕೊಂಡು ಟೆಂಪೋ ಟ್ರಾವೆಲ್ಸ್ ಆಲಮಟ್ಟಿ ಕಡೆಗೆ ಹೊರಟ್ಟಿತ್ತು. ಆದರೆ ಪಲ್ಟಿ ಹೊಡೆದ ಪರಿಣಾಮ ಚೊಕಾವಿ ಸರಕಾರಿ ಶಾಲೆಯ 15 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.40 ವರ್ಷದ ಕ್ಲಿನರ್ ದಾವಲಸಾಬ್ ಅಲಿಸಾಬ್ ಸಾಲವಾಡಗಿ ಮೃತಪಟ್ಟಿದ್ದಾನೆ.

ಗಂಭೀರಗೊಂಡ ಮಕ್ಕಳನ್ನ ತಾಳಿಕೋಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಮಕ್ಕಳಿಗೆ ತಮದಡ್ಡಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Edited By : Shivu K
PublicNext

PublicNext

25/02/2022 01:03 pm

Cinque Terre

54.56 K

Cinque Terre

2

ಸಂಬಂಧಿತ ಸುದ್ದಿ