ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೂಗಲ್ ಮ್ಯಾಪ್ ಬಳಸುವಾಗ ಜೋಕೆ : ಮದುವೆಗೆ ಹೋಗುವವರು ಮಸಣ ಸೇರಿದರು..

ಕೊಲ್ಲಂ: ಆಧುನಿಕ ಜಗತ್ತಿನಲ್ಲಿ ಎಲ್ಲವೂ ಡಿಜಟಲೀಕರಣ ಸದ್ಯಕ್ಕಂತೂ ಗೂಗಲ್ ಅನ್ನು ನಂಬುವಷ್ಟು ಮನುಷ್ಯರು ಮನುಷ್ಯರನ್ನು ನಂಬುತ್ತಿಲ್ಲ. ಸದ್ಯ ಇದೇ ಗೂಗಲ್ ಮೂವರ ಜೀವಕ್ಕೆ ಕುತ್ತಾಗಿದೆ. ಸಾಮಾನ್ಯವಾಗಿ ಅಪರಿಚಿತ ಸ್ಥಳಗಳಿಗೆ ಹೋಗುವಾಗ ಗೂಗಲ್ ಮ್ಯಾಪ್ ಬಳಸುವುದು ಅನಿವಾರ್ಯ. ಆದರೆ ಈ ಮ್ಯಾಪ್ ಬಳಸುವ ಮುನ್ನ ಸ್ವಲ್ಪ ಗಮನವಿರಲಿ.

ಸದ್ಯ ಇದೇ ಮ್ಯಾಪ್ ನೋಡುತ್ತಾ ಎಚ್ಚರ ತಪ್ಪಿ ಕೇರಳದಲ್ಲಿ ದುರಂತವೊಂದು ನಡೆದಿದೆ. ಹೌದು ಏಳು ಮಂದಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಕಾರೊಂದು ಕೇರಳದ ಅಡೂರ್ ಬೈಪಾಸ್ ಬಳಿ ಕಾಲುವೆಗೆ ಉರುಳಿಬಿದ್ದು ಮೂರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

ದಾರಿ ಗೊತ್ತಿಲ್ಲದೇ ಚಾಲಕ ಗೂಗಲ್ ಮ್ಯಾಪ್ ಬಳತ್ತಿದ್ದ. ಪದೇಪದೇ ಮ್ಯಾಪ್ ನೋಡುತ್ತಿದ್ದರಿಂದ ಈ ಅವಘಢ ಸಂಭವಿಸಿದೆ. ಮೃತಪಟ್ಟವರನ್ನು ಶ್ರೀಜಾ (45), ಶಾಕುಂತಲಾ (51) ಮತ್ತು ಇಂದಿರಾ (57) ಎಂದು ಗುರುತಿಸಲಾಗಿದೆ. ಕಾಲುವೆಯಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದರಿಂದ ಕಾರು ಕೊಚ್ಚಿ ಹೋಗಿ ಸಂಪೂರ್ಣ ಮುಳುಗಡೆಯಾಗಿ ದುರ್ಘಟನೆ ಸಂಭವಿಸಿದೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಡನೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ್ದು, ಉಳಿದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Edited By : Nirmala Aralikatti
PublicNext

PublicNext

12/02/2022 07:44 am

Cinque Terre

56.65 K

Cinque Terre

6

ಸಂಬಂಧಿತ ಸುದ್ದಿ