ಮುಂಬೈ: ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಈ ದುರ್ಘಟನೆಯಿಂದಾಗಿ ಸುಮಾರು 25 ಸಾವಿರ ಲೀಟರ್ ಹಾಲು ಚರಂಡಿ ಪಾಲಾಗಿದೆ. ವ್ಯಕ್ತಿಯೋರ್ವ ಟ್ಯಾಂಕರ್ ನಿಂದ ಹಾಲನ್ನು ಚರಂಡಿಗೆ ಹರಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಲನ್ನು ಖಾಲಿ ಮಾಡಿದ ಬಳಿಕ ಟ್ಯಾಂಕರ್ ಲಾರಿಯನ್ನು ಕ್ರೇನ್ ಮೂಲಕ ಎತ್ತಿ ರಸ್ತೆ ಮೇಲೆ ನಿಲ್ಲಿಸಲಾಗಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ.
PublicNext
08/02/2022 10:17 pm