ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲೆಕ್ಟ್ರಿಕಲ್ ಬಸ್ ಹರಿದು 6 ಮಂದಿ ದಾರುಣ ಸಾವು- 12 ಜನರಿಗೆ ಗಾಯ

ಲಕ್ನೋ: ಚಾಲಕನ ನಿಯಂತ್ರಣ ತಪ್ಪಿದ ಎಲೆಕ್ಟ್ರಿಕ್ ಬಸ್ ಹರಿದು 6 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ 12 ಜನರು ಗಾಯಗೊಂಡಿದ್ದು, ಮೂರು ಕಾರ್ ಹಾಗೂ ಹಲವು ಬೈಕ್ ಈ ಅಪಘಾತದಲ್ಲಿ ಜಖಂ ಆಗಿವೆ. ಅಷ್ಟೇ ಅಲ್ಲದೆ ಅಲ್ಲೆ ಪಕ್ಕದಲ್ಲಿ ಟ್ರಾಫಿಕ್ ಭೂತ್‍ಗೆ ಬಸ್‌ ನುಗ್ಗಿ ನಂತರ ಟ್ರಕ್‍ಗೆ ಗುದ್ದಿ ಬಸ್ ನಿಂತಿದೆ. ಗಾಯಾಳುಗಳನ್ನು ಅಲ್ಲಿಯೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾನ್ಪುರದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್, ಬಸ್ ಚಾಲಕನನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

31/01/2022 05:56 pm

Cinque Terre

96.82 K

Cinque Terre

0

ಸಂಬಂಧಿತ ಸುದ್ದಿ