ತುಮಕೂರು : ದನ ಮೇಯಿಸಲು ತೆರಳಿದ್ದ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಪಾವಗಡ ತಾಲೂಕಿನ ದೇವರಾಯನರೊಪ್ಪದಲ್ಲಿ ನಡೆದಿದೆ.
4ನೇ ತರಗತಿಯಲ್ಲಿ ಓದುತ್ತಿದ್ದ ಷರೀಫ್ (10), 8ನೇ ತರಗತಿಯ ಚಾಂದವಿ (14), ಹಾಗೂ ಬಾನವಿ (13) ಮೃತ ಮಕ್ಕಳು. ದನಗಳಿಗೆ ನೀರು ಕುಡಿಸಲು ಕೆರೆಯ ಹತ್ತಿರ ಹೋದ ವೇಳೆ ನೀರಿನಲ್ಲಿ ಆಟವಾಡುತ್ತಿರುವ ವೇಳೆ ಓರ್ವ ಕಾಲು ಜಾರಿ ಕೆರೆಯಲ್ಲಿ ಬೀಳುತ್ತಿದ್ದಂತೆ ಒಬ್ಬರನ್ನು ರಕ್ಷಿಸಲು ಒಬ್ಬರಂತೆ ಮೂವರು ಜಲಸಮಾಧಿಯಾಗಿದ್ದಾರೆ.
ಅರಸೀಕೆರೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
PublicNext
29/01/2022 09:43 pm