ಕೊಲ್ಲಂ(ಕೇರಳ): ಬೈಕ್ ಸ್ಟಟ್ ಮಾಡಲು ಹೋಗಿ ಭೀಕರ ಅಪಘಾತಕ್ಕೀಡಾಗಿದ ವಿದ್ಯಾರ್ಥಿಯೋರ್ವ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರದಲ್ಲಿ ನಡೆದಿದೆ.
ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿಗಳ ಗುಂಪೊಂದು ಬೈಕ್ ಸ್ಟಂಟ್ ನಡೆಸುತ್ತಿತ್ತು. ಈ ವೇಳೆ ಅಶ್ವಂತ್ ಕೃಷ್ಣ ಎಂಬ ವಿದ್ಯಾರ್ಥಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದರ ಎದುರಿಗೆ ಬರುತ್ತಿದ್ದ ಬುಲೆಟ್ ಬೈಕ್ ಅಷ್ವಂತ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಶ್ವಂತ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸದ್ಯ ಅಶ್ವಂತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಹಿಂದೆ ಬರುತ್ತಿದ್ದ ಸ್ನೇಹಿತರ ಬೈಕ್‌ಗಳು ಕೂಡ ಜಖಂಗೊಂಡಿವೆ. ಬೈಕ್ ಸ್ಟಂಟ್ ಮಾಡುವಾಗ ವೇಳೆ 100 ಕಿಲೋಮೀಟರ್ ಗಿಂತಲೂ ಹೆಚ್ಚು ವೇಗದಲ್ಲಿ ಬರುತ್ತಿದ್ದರು ಎನ್ನಲಾಗಿದೆ.
PublicNext
22/01/2022 04:24 pm