ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಲ್ಮೆಟ್ ಉಳಿಸಿತು ಪ್ರಾಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ದಾವಣಗೆರೆ: ತಲೆಗೆ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿದ್ದರಿಂದಾಗಿ ವ್ಯಕ್ತಿಯೊಬ್ಬರ ಪ್ರಾಣ ಉಳಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಶ್ರಮ ಜೀವಿ ಲಾಡ್ಜ್ ಮ್ಯಾನೇಜರ್ ಬದುಕುಳಿದವರು ಎಂದು ತಿಳಿದು ಬಂದಿದೆ. ನಗರದ ಪಿ. ಬಿ. ರಸ್ತೆಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸುಲ್ತಾನ್ ಜ್ಯುವೆಲರ್ಸ್ ಬಳಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಶ್ರಮಜೀವಿ ಲಾಡ್ಜ್ ಮ್ಯಾನೇಜರ್ ಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ ನ ಚಕ್ರಕ್ಕೆ ಬೈಕ್ ಸಿಲುಕಿಕೊಂಡಿತು. ಇನ್ನು ಪೂರ್ಣಪ್ರಮಾಣದ ಹೆಲ್ಮೆಟ್ ಧರಿಸಿದ ಕಾರಣ ಮ್ಯಾನೇಜರ್ ತಲೆಗೆ ಹೊಡೆತ ಬಿದ್ದಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಲ್ಲೇ ಇದ್ದ ಸ್ಥಳೀಯರು ಕೂಡಲೇ ರಕ್ಷಿಸಿದ್ದಾರೆ.

ದಾವಣಗೆರೆಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಶುಕ್ರವಾರ ರಾತ್ರಿ ದಾವಣಗೆರೆಯಿಂದ ಚಿಕ್ಕಮಗಳೂರು ಕಡೆಗೆ ಬಸ್ ಹೋಗುತಿತ್ತು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಶ್ರಮಜೀವಿ ಮ್ಯಾನೇಜರ್ ಬೈಕ್ ನಲ್ಲಿ ಹೋಗುವಾಗ ಅಪೂರ್ವ ರೆಸಾರ್ಟ್ ಸಮೀಪದ ಸರ್ಕಲ್ ನ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ. ಬಸ್ ನಿಧಾನವಾಗಿ ತಿರುವಿನಲ್ಲಿ ಬರುತಿತ್ತು. ಆಗ ತಿರುವು ಕ್ರಾಸ್ ಮಾಡಲು ಹೋದಾಗ ಬಸ್ ನ ಚಕ್ರಕ್ಕೆ ಸಿಲುಕಿಕೊಂಡ ರಭಸಕ್ಕೆ ನುಜ್ಜುಗುಜ್ಜಾಗಿದೆ.

Edited By : Shivu K
PublicNext

PublicNext

22/01/2022 12:13 pm

Cinque Terre

80.74 K

Cinque Terre

5