ಬೆಳಗಾವಿ: ತೋಟದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ರೈತ ಉರಿಯುತ್ತಿರೋ ಬೆಂಕಿಯಲ್ಲಿಯೇ ನುಗ್ಗಿ ಜಾನುವಾರು ರಕ್ಷಿಸಿದ್ದಾನೆ. ಈ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ನಡೆದಿದೆ.
ನವರತ್ನ ಜೋಳದ ಎಂಬುವವರ ತೋಟದ ಮನೆಯಲ್ಲಿಯೇ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಒಂದು ಕಾರು ಬೆಂಕಿಗಾಹುತಿ ಆಗಿದೆ. ಎರಡು ಎಮ್ಮೆ ಮತ್ತು ಒಂದು ಹಸು ಗಂಭೀರವಾಗಿಯೇ ಗಾಯಗೊಂಡಿವೆ.
ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಗಳೆಲ್ಲ ಭಸ್ಮಗೊಂಡಿವೆ. ಅಂದಾಜು 80 ಸಾವಿರಕ್ಕೂ ಹೆಚ್ಚು ಹಾನಿ ಆಗಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
19/01/2022 11:01 pm