ದಾವಣಗೆರೆ: ನಿಯಂತ್ರಣ ತಪ್ಪಿ ಬಾತಿ ಕೆರೆಯಲ್ಲಿ ಕಾರ್ ಪಲ್ಟಿಯಾದ ಘಟನೆ ನಡೆದಿದ್ದು, ಕ್ರೇನ್ ಮೂಲಕ ಕಾರನ್ನು ಹೊರಕ್ಕೆ ತೆಗೆಯಲಾಗಿದೆ.
ದಾವಣಗೆರೆ ತಾಲೂಕಿನ ಬಾತಿ ಬಳಿಯ ಕೆರೆಯಲ್ಲಿ ಕಾರೊಂದು ಪಲ್ಟಿಯಾಗಿದ್ದು, ಕ್ರೇನ್ ಮೂಲಕ ಕಾರ್ ಅನ್ನ ಹೊರಗೆ ತೆಗೆಯಲಾಗಿದೆ. ಹರಿಹರ ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದ್ದು, ಬಾತಿ ಕೆರೆಯಲ್ಲಿ ಮುಳುಗಿತ್ತು.
ಘಟನೆ ವೇಳೆ ಕಾರ್ ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ ಹುಲಮನಿ ಕನ್ಸಸ್ಟ್ರಕ್ಸನ್ ಗೆ ಸೇರಿದ್ದು ಎನ್ನಲಾಗಿದೆ. ಬಳಿಕ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದರು. ಬಳಿಕ ಕೆರೆಯ ನೀರಿನಲ್ಲಿ ಮುಳುಗಿದ್ದ ಕಾರನ್ನ ಕ್ರೇನ್ ಬಳಸಿ ಸುರಕ್ಷಿತವಾಗಿ ಹೊರಗೆ ತೆಗೆಯಲಾಗಿದೆ.
ಘಟನೆಯಲ್ಲಿ ಕಾರ್ ಡ್ಯಾಮೇಜ್ ಆಗಿದೆ. ಕಾರ್ ಅನ್ನ ಹೊರಗೆ ತೆಗೆಯುತ್ತಿದ್ದ ದೃಶ್ಯವನ್ನ ನೋಡಲು ಸ್ಥಳೀಯರು ಹಾಗೂ ವಾಹನ ಸವಾರರು ಸೇರಿದ್ದರು. ಹೀಗಾಗಿ, ದಾವಣಗೆರೆ-ಹರಿಹರ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.
PublicNext
19/01/2022 05:56 pm