ದಾವಣಗೆರೆ: ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಬೈಕ್ ಅಪಘಾತವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಸ್ತೆಯಲ್ಲ ನಡೆದುಕೊಂದು ಹೋಗುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ನಲ್ಲೂರು ಗ್ರಾಮದ 50 ವರ್ಷದ ಸೈಫುಲ್ಲಾ ಹಾಗೂ ಗಾಣದಕಟ್ಟೆ ಗ್ರಾಮದ 20 ವರ್ಷದ ಶರತ್ ಗಾಯಗೊಂಡವರು. ಸೈಫುಲ್ಲಾ ನಲ್ಲೂರು ಗ್ರಾಮದ ಸರ್ಕಲ್ ನಲ್ಲಿ ದಾಟಿ ವೃತ್ತದ ಮುಖ್ಯ ರಸ್ತೆ ದಾಟುತ್ತಿದ್ದರು. ಈ ವೇಳೆ ಶರತ್ ಎಂಬ ಯುವಕ ಬೈಕ್ ನಲ್ಲಿ ಅತೀ ವೇಗವಾಗಿ ಬಂದು ಸೈಫುಲ್ಲಾಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಡಿಕ್ಕಿಯಾದ ರಭಸಕ್ಕೆ ಸೈಫುಲ್ಲಾರ ಕಾಲುತುಂಡಾಗಿದ್ದು, ಆಗ ಕೆಳಗೆ ಬಿದ್ದ ಬೈಕ್ ಸವಾರ ಶರತ್ ಗೆ ತೀವ್ರ ಗಾಯವಾಗಿದೆ.
PublicNext
19/01/2022 05:49 pm