ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಆಸ್ತಿಗಾಗಿ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು: ಆಸ್ತಿ ವಿಚಾರದಲ್ಲಿ ಸಂಬಂಧಿಕರ ನಡುವೆ ಗಲಾಟೆ ಮಹಿಳೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹಿನಕಲ್ ಗ್ರಾಮದ ನಾಯಕರ ಬೀದಿಯಲ್ಲಿ ನಡೆದಿದೆ.

ಘಟನೆಯಲ್ಲಿ ಸಾಕಮ್ಮ (50) ಕೊಲೆಯಾದ ಮಹಿಳೆ. ಸದ್ಯ ಕೊಲೆಯಲ್ಲಿ ಭಾಗಿಯಾದ ಮನು, ಗೋವಿಂದನಾಯಕ, ಕಿರಣ್, ಲಕ್ಷ್ಮೀ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಮನೋಜ್ ಪರಾರಿಯಾಗಿದ್ದಾನೆ.

ಹಿನಕಲ್ ನ ದಾಸನಾಯಕ ಎಂಬುವರ ಪತ್ನಿ ಸಾಕಮ್ಮಳನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಗೈಯಲಾಗಿದೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

15/01/2022 11:43 am

Cinque Terre

74.07 K

Cinque Terre

5

ಸಂಬಂಧಿತ ಸುದ್ದಿ