ಹಾವೇರಿ: ಅತಿ ವೇಗದಲ್ಲಿ ಬಂದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ,ಕಾರ್‌ನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟದ್ದಾನೆ. ಮತ್ತೋರ್ವ ಗಾಯಗೊಂಡಿದ್ದಾನೆ. ಈ ಘಟನೆ ಹಾವೇರಿ ತಾಲೂಕಿನ ದೇವಗಿರಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನ ವೀರೇಶ್ ಹಾನಗಲ್ (30) ಎಂದು ಗುರುತಿಸಲಾಗಿದೆ. ತಾಲೂಕಿನ ವರದಹಳ್ಳಿ ಗ್ರಾಮದ ನಿವಾಸಿ ಈ ವ್ಯಕ್ತಿ. ಇದೇ ಕಾರ್‌ನಲ್ಲಿದ್ದ ಮತ್ತೋರ್ವ ವ್ಯಕ್ತಿ ಸುರೇಶ್ ರಾಯನಗೌಡ (29) ಕಾಲುಗಳಿಗೆ ಗಾಯ ಆಗಿದೆ. ಜಿಲ್ಲಾಸ್ಪತ್ರೆಗೂ ಈಗಾಗಲೇ ರವಾನಿಸಲಾಗಿದೆ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಚಾಲಕನ ನಿರ್ಲಕ್ಷದಿಂದಲೇ ಈ ಘಟನೆ ನಡೆದಿದೆ ಅನ್ನೋ ಮಾಹಿತಿ ಈಗ ಸಿಕ್ಕಿದೆ.
PublicNext
14/01/2022 09:46 am