ಚಿಕ್ಕಬಳ್ಳಾಪುರ: ದಟ್ಟಮಂಜು ಆವರಿಸಿದ ಕಾರಣ ವೇಗವಾಗಿ ಬಂದಿದ್ದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಹಾಗೂ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಚಿಕ್ಕಬಳ್ಳಾಪುರ ತಾಲೂಕಿನ ಪೈಲಗೂರ್ಕಿ ಬಳಿ ಈ ಘಟನೆ ಸಂಭವಿಸಿದೆ. ಮೃತರನ್ನ ಧರಣೇಶ್ ಮತ್ತು ನಿರಂಜನ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಅನಂತಪುರ ಜಿಲ್ಲೆಯ ಗುಂತಕಲ್ಲು ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಗುಡಿಬಂಡೆ ಇನ್ಸ್‌ಪೆಕ್ಟರ್ ಲಿಂಗರಾಜು ಮತ್ತು ಸಿಬ್ಬಂದಿ ಭೇಟಿಕೊಟ್ಟಿದ್ದಾರೆ. ಪರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
08/01/2022 08:43 am